-
ಇದ್ ಮದುಮಕ್ಕ ಶೇಶೋಪಚಾರಕ್ಕೆ ಕುದುಕೊಂಡಿದ್ದವೆ
-
ಆಗ ಹುಡುಗನ ಕಡೆಂದ ಒಂದು ಮೂರು ಜನ
-
ಹೆಂಗಸರಿರೊಕು
-
ಹುಡುಗಿಯ ಕಡೆ ಒಂದು ಮೂರು ಜನ ಹೆಂಗಸರಿರೊಕು.
-
ಒಂದು ಅಕ್ಕಿ ಆರತಿ ಮಾಡುವಾಗ ಹೇಳುವ ಒಂದು ಸೊಬಾನೆ.
-
ರಾಜಿಪಮಣಿಮಯ ರತ್ನ ಪೀಟದಲಿ
-
ರಾಜಾದಿರಾಜ ಶ್ರೀರಾಮ ಕುಳ್ಳಿರಲು
-
ರಾಜವಾಂಬಕಿ ಸೀತೆಯೊಡಲೊಪ್ಪಿರಲು
-
ರಾಜ ವದನೆಯರು ಹರಿವಾಣಾದಲಿ
-
ರಾಜಿಸುವಾದಾರತಿಯ ಬೆಳಗಿರೆ ಶೋಬಾನೆ
-
ಮುತ್ತಿನೋಲೆಯ ಹರಪದಕವಿಟ್ಟವಳು
-
ಮುತ್ತಿನ ಬೊಟ್ಟು ಮೂಗುತ್ತಿ ಇಟ್ಟವಳು
-
ಮುತ್ತಿನ ಕಡಗ ಮುಂಗೈಯಲ್ಲೊಪ್ಪಿರಲು
-
ಮುತೈದೆಯರು ಹರಿವಾಣದಲಿ
-
ಮುತ್ತಿನಾರತಿಯ ಬೆಳಗಿರೆ ಶೋಬನೆ
-
ಕನಕ ಕುಂಡಲ ಕುಂಡಲಾಂಕೃತಗೆ
-
ಕನಕಾದರಣದಿ ಕಮಲ ನಯನನಿಗೆ
-
ಕನಕಾದಾರತಿಯ ಬೆಳಗಿರೆ ಶೋಬನೆ.
-
ದಶರತ ರಾಯನ ಶಿಶುವೆನಿಸಿದಗೆ
-
ದಶಾಶಿರನ ಕೊರಳನು ಕತ್ತರಿಸಿದವಗೆ.
-
ಚತುವರ ಭುವನನಿದಾತೆಗೆ
-
ನೀಲಾದಾರತಿಯ ಬೆಳಗಿರೆ ಶೋಬಾನೆ .
-
ನಾರಾದವಂದ್ಯಗೆ ನಂದಕಂದನಿಗೆ
-
ನಾರಿ ದ್ರೌಪದಿಗಭಯವಿತ್ತವಗೆ
-
ನಾರಾಯಣ ನಮೋ ನಮೋ ಎಂದು
-
ಸ್ತುತಿಸಿದ ನಾರಿಯಾದಾರತಿಯ ಬೆಳಗಿರೆ ಶೋಬಾನೆ